ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ತಿದ್ದುಪಡಿ 2016ರ ಪ್ರಕರಣ 310 (ಬಿ) ರನ್ವಯ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯನ್ನು ಸನಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 5 ಉಪಾಧ್ಯಕ್ಷರೊಂದಿಗೆ ಮತ್ತು 13 ಸಮಿತಿಯ ಸದಸ್ಯರನ್ನೊಳಗೊಂಡಂತೆ ದಿನಾಂಕ 20-09-2016 ರಂದು ಹೊರಡಿಸಲಾದ ಸರ್ಕಾರದ ಆದೇಶದಡಿ ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ಮತ್ತು ಆಯವ್ಯಯ ದಸ್ತಾವೇಜಿನೊಂದಿಗೆ ಹಾಜರುಪಡಿಸಬೇಕಾದ ವಾರ್ಷಿಕ ಹಣಕಾಸು ಪುನರಾವಲೋಕನೆಯನ್ನು ರೂಪಿಸುವುದಕ್ಕೆ ಸರ್ಕಾರವನ್ನು ಸಮರ್ಥಗೊಳಿಸಲು ಸ್ಥಾಪಿಸಿದೆ. 

ಉದ್ದೇಶಗಳು : 

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ವಾರ್ಷಿಕ ಆರ್ಥಿಕ ಅವಲೋಕನಕ್ಕಾಗಿ ಆಯವ್ಯಯ ಮೂಲ ಮಟ್ಟದಿಂದ ಅಭಿವೃದ್ಧಿ ಯೋಜನೆಗಳನ್ನು ಸುಲಭಗೊಳಿಸಲು ಆಯವ್ಯಯ ತಯಾರಿಕೆಯ ಒದಗಿಸುವ ಮತ್ತು ರೂಪಿಸುವ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ 

ಕಾರ್ಯಚಟುವಟಿಕೆಗಳು : 

• ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ರಾಜ್ಯದ ಎಲ್ಲಾ ಜಿಲ್ಲೆಗಳ ಯೋಜನೆಗಳು ಮತ್ತು ಇತರೆ ಯೋಜನಾ ಘಟಕಗಳ ನಡುವೆ ಪರಸ್ಪರ ಸಮಾಲೋಚನೆ ಮತ್ತು ಸಮಾಲೋಚನೆಗಾಗಿ ಒದಗಿಸುವುದರೊಂದಿಗೆ ನಗರ ಮತ್ತು ಗ್ರಾಮೀಣ ಯೋಜನಾ ವಲಯ ಮತ್ತು ಪ್ರಾದೇಶಿಕ ಅಂಶಗಳನ್ನು ಸಂಯೋಜಿಸುವ ಚೌಕಟ್ಟನ್ನು ಒದಗಿಸುವುದು. 
• ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯು ಯೋಜನೆಗಳನ್ನು ಕ್ರೋಢೀಕರಣಗೊಳಿಸುವಾಗ ಜಿಲ್ಲೆಗಳು ತಯಾರಿಸಿರುವ ಯೋಜನೆಗಳನ್ನು ಬದಲಾಯಿಸಬಾರದು. 
• ಯೋಜನೆಗಳ ಕ್ರೋಢೀಕರಣಕ್ಕೆ ಸಂಬಂಧಿಸಿದಂತೆ, ಸಮಿತಿಯು ಸರ್ಕಾರದ ಯಾವುದೇ ಸಂಸ್ಥೆಗಳನ್ನು ಸಂಪರ್ಕಿಸಬಹುದು.
• ಯೋಜನೆಗಳ ಕ್ರೋಢೀಕರಣ ಮತ್ತು ಸಂಯೋಜನೆ ಪ್ರಕ್ರಿಯೆ ಮುಗಿದ ಕೂಡಲೇ ಸಮಿತಿಯು ಕ್ರೋಢೀಕೃತÀ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. 
• ಸ್ಥಳೀಯ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ನಿಯಮಗಳ ರಚನೆ, ಜಿಲ್ಲೆಗಳ ಸುಸಂಘಟನೆ, ರಾಜ್ಯ ಯೋಜನೆ ಮತ್ತು ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ನೀತಿಗಳನ್ನು ವಿನ್ಯಾಸಗೊಳಿಸಲು ಸಮಿತಿಯು ಸಹಕಾರ ನೀಡುವುದು.ಕಡತದ ವಿಧ ವಿಷಯ ಆದೇಶ ಸಂಖ್ಯೆ ಮತ್ತು ದಿನಾಂಕ

ಗಾತ್ರ(ಎಂ.ಬಿ) 

ವಿಕ್ಷೀಸಿ / ಡೌನ್ಲೋಡ್ ಮಾಡಿ
ಸುತ್ತೋಲೆ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳು. ಗ್ರಾಅಪ 107 ಜಿಪಸ 2019(3), ಬೆಂಗಳೂರು, ದಿನಾಂಕ:26.07.2019  42.68  ವಿಕ್ಷೀಸಿ
ಸುತ್ತೋಲೆ

ಜಿಲ್ಲಾ ಯೋಜನಾ ಸಮಿತಿಗಳ ಕಾರ್ಯವಿಧಾನಗಳ ಬಗ್ಗೆ ಮಾರ್ಗಸೂಚಿಗಳು.

ಗ್ರಾಅಪ 107 ಜಿಪಸ 2019(2), ಬೆಂಗಳೂರು, ದಿನಾಂಕ:26.07.2019  46.12  ವಿಕ್ಷೀಸಿ
ಸುತ್ತೋಲೆ

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯವಿಧಾನ ಮತ್ತು ಮಾರ್ಗಸೂಚಿಗಳು.

ಗ್ರಾಅಪ 107 ಜಿಪಸ 2019(1), ಬೆಂಗಳೂರು, ದಿನಾಂಕ:26.07.2019  14.10  ವಿಕ್ಷೀಸಿ
ಸರ್ಕಾರದ ನಡವಳಿಗಳು

ವಿಕೇಂದ್ರಿಕರಣ ವಿಶ್ಲೇಷಣಾ ಕೋಶವು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ.

ಗ್ರಾಅಪ 98 ಜಿಪಸ 2019, ಬೆಂಗಳೂರು, ದಿನಾಂಕ:26.08.2019  1.88   ವಿಕ್ಷೀಸಿ
ಸರ್ಕಾರದ ನಡವಳಿಗಳು

ಗ್ರಾಮೀಣಾಭಿವೃದ‍್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಕೇಂದ್ರಿಕರಣ ವಿಶ್ಲೇಷಣಾ ಕೋಶದ ಕಛೇರಿ ಬಾಡಿಗೆ, ಕಛೇರಿ ವೆಚ್ಚ, ಅಧಿಕಾರಿಗಳು/ಸಿಬ್ಬಂದಿ ವರ್ಗಕ್ಕೆ ಕರ್ನಾಟಕ ಪಂಚಾಯತ್ ರಾಜ್ ಅನುದಾನದಡಿಯಲ್ಲಿ ವೆಚ್ಚ ಭರಿಸುವ ಬಗ್ಗೆ.

ಗ್ರಾಅಪ 99 ಜಿಪಸ 2019, ಬೆಂಗಳೂರು, ದಿನಾಂಕ:31.07.2019  1.19  ವಿಕ್ಷೀಸಿ
ಸಭಾ ನಡವಳಿಗಳು

ದಿ:31.08.2019 ರಂದು ಪೂರ್ವಹ್ನ 11:30 ಗಂಟೆಗೆ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ‍್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಅಭಿವೃದ‍್ದಿ ಯೋಜನೆಗಳನ್ನು ರೂಪಿಸುವ ಕುರಿತು ನಡೆದ ಸಭೆಯ ಸಭಾ ನಡವಳಿಗಳು.

ಕ.ರಾ.ವಿ.ಯೋ.&ಅ.ಸ - 8 - 2019, ಬೆಂಗಳೂರು, ದಿನಾಂಕ:05.09.2019  2.36  ವಿಕ್ಷೀಸಿ
ಸಭಾ ನಡವಳಿಗಳು

ದಿ:17.08.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಕರ್ನಾಟಕ ಅಭಿವೃದ‍್ದಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಚರ್ಚಿಸುವ ವಿಷಯಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಮಾದರಿ ನಮೂನೆಗಳನ್ನು ಇತ್ಯರ್ಥಗೊಳಿಸಲು ನಡೆದ ಸಭೆಯ ನಡವಳಿಗಳು.

ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿನಾಂಕ:22.08.2019  2.24  ವಿಕ್ಷೀಸಿ
ಸಭಾ ನಡವಳಿಗಳು

ದಿ:17.07.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ‍್ಧಿ ಸಮಿತಿ, ಜಿಲ್ಲಾ ಯೋಜನಾ ಸಮಿತಿ ಹಾಗೂ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿಗಳ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸುವ ಕುರಿತು ನಡೆದ ಸಭೆಯ ನಡವಳಿಗಳು.

ಗ್ರಾಅಪ 107 ಜಿಪಸ 2019, ಬೆಂಗಳೂರು, ದಿನಾಂಕ:19.07.2019  2.60  ವಿಕ್ಷೀಸಿ
ಸರ್ಕಾರದ ನಡವಳಿಗಳು

ಕರ್ನಾಟಕ ಅಭಿವೃದ‍್ಧಿ ಕಾರ್ಯಕ್ರಮವನ್ನು (20 ಅಂಶ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮಿತಿ ರಚನೆ ಕುರಿತು.

ಗ್ರಾಅಪ 479 ಗ್ರಾಪಂಅ 2019, ಬೆಂಗಳೂರು, ದಿನಾಂಕ:11.06.2019  22.90  ವಿಕ್ಷೀಸಿ
ಸಭಾ ನಡವಳಿಗಳು

ದಿ:27.5.2019 ರಂದು ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ‍್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಬಹು ಗ್ರಾಮ ಪಂಚಾಯಿತಿ ಘನತ್ಯಾಜ್ಯ ನಿರ್ವಹಣೆ ಘಟಕಗಳ ಸ್ಥಾಪನೆ ಬಗ್ಗೆ ನಡೆದ ಸಭೆಯ ಸಭಾ ನಡವಳಿಗಳು.

ಕ.ರಾ.ವಿ.ಯೋ.&ಅ.ಸ - 9 - 2019, ಬೆಂಗಳೂರು, ದಿನಾಂಕ:29.05.2019  2.93  ವಿಕ್ಷೀಸಿ
ಸಭಾ ನಡವಳಿಗಳು

ದಿ:3.5.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಂ.ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ‍್ಧಿ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ನಡೆದ ಸಭೆಯ ಸಭಾ ನಡವಳಿಗಳು.

ಕ.ರಾ.ವಿ.ಯೋ.&ಅ.ಸ - 8 - 2019  3.17  ವಿಕ್ಷೀಸಿ
ಸಭಾ ನಡವಳಿಗಳು

ದಿ:01.03.2019 ರಂದು ಪೂರ್ವಹ್ನ 11:00 ಗಂಟೆಗೆ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ‍್ಧಿ ಸಮಿತಿ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ‍್ಧಿ ಸಮಿತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ANSSIRD ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರುಗಳು, ಪಂಚಾಯತ್ ರಾಜ್ - I & II, ಗಣಕಕೋಶ ರವರ ಜೊತೆ ನಡೆದ ಸಭೆಯ ಸಭಾ ನಡವಳಿಗಳು.

ಕ.ರಾ.ವಿ.ಯೋ.&ಅ.ಸ - 8 - 2019, ಬೆಂಗಳೂರು, ದಿನಾಂಕ:05.03.2019  2.28  ವಿಕ್ಷೀಸಿ
ಸಭಾ ನಡವಳಿಗಳು

ದಿ:11.01.2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ‍್ಧಿ ಸಮಿತಿ ಸಭೆಯ ಸಭಾ ನಡವಳಿಗಳು.

ಗ್ರಾಅಪ 03 ಕ.ರಾ.ವಿ.ಯೋ.&ಅ.ಸ 2018, ಬೆಂಗಳೂರು, ದಿನಾಂಕ:31.01.2019  5.11  ವಿಕ್ಷೀಸಿ

ಇತ್ತೀಚಿನ ನವೀಕರಣ​ : 25-06-2020 04:51 PM ಅನುಮೋದಕರು: Admin